ಕ್ರಿಸ್ಟೋಫರ್ ಹೆನ್ರಿ ಗೇಲ್ (ಜನನ: ಸೆಪ್ಟೆಂಬರ್ ೨೧, ೧೯೭೯ ಕಿಂಗ್‍ಸ್ಟನ್, ಜಮೈಕಾದಲ್ಲಿ) ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರ. ಇವರು ಅಗ್ರ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮಾನ್. ಇವರು ಬಲಗೈ ಆಫ್ ಸ್ಪಿನ್ ಕೂಡ ಮಾಡಬಲ್ಲರು. ಗೇಲ್ ತಮ್ಮ ಸ್ಫೋಟಕ ಬ್ಯಾಟಿಂಗ್‍ಗೆ ಹೆಸರುವಾಸಿ. ಗೇಲ್ ಈಗ ೩೨ ವರ್ಷ ವಯಸ್ಸಿನವರಾಗಿದ್ದು ೨೨೮ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದಾರೆ ಮತ್ತು ೯೧ ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ೨೦೧೦ರಲ್ಲಿ ಶ್ರೀಲಂಕಾದ ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ೩೩೩ ರನ್ ಗಳಿಸುವುದರ ಮೂಲಕ ತನ್ನ ಜೀವನದ ಅತ್ತ್ಯುತ್ತಮ ಸಾಧನೆ ಮಾಡಿದ್ದಾರೆ. ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರವಾಗಿ ಆಡಿದ್ದರು. ೪ನೇ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡುತ್ತಿದ್ದಾರೆ. ೨೦೧೧ರಲ್ಲಿ ನಡೆದ ಐಪಿಎಲ್‍ನಲ್ಲಿ ೬೦೮ ರನ್ ಗಳಿಸುವುದರ ಮೂಲಕ ಆರೆಂಜ್ ಕಪ್ ತಮ್ಮದಾಗಿಸಿಕೊಂಡರು. == ಆರಂಭಿಕ ಕ್ರಿಕೆಟ್‌ ವೃತ್ತಿಜೀವನ == ಗೇಲ್ ಜಮೈಕಾದ ಕಿಂಗ್‌ಸ್ಟನ್‌ನಲ್ಲಿರುವ ಲ್ಯೂಕಾಸ್ ಕ್ರಿಕೆಟ್ ಕ್ಲಬ್‌ನೊಂದಿಗೆ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. "ಲ್ಯೂಕಾಸ್ ಇಲ್ಲದಿರುತ್ತಿದ್ದರೆ, ನಾನು ಇಂದು ಎಲ್ಲಿರುತ್ತಿದ್ದೆ ಎಂದು ಊಹಿಸಲೂ ಆಗಲ್ಲ" ಎಂದು ಗೇಯ್ಲ್ ಸಂದರ್ಶನ ಒಂದರಲ್ಲಿ ಹೇಳಿದ್ದರು. ೨೦೦೮ರ ಐಪಿಎಲ್ ನಲ್ಲಿ ಆಡಿದ್ದಕ್ಕಾಗಿ ಟೀಕೆಗೆ ಒಳಗಾಗಿದ್ದ ಗೇಯ್ಲ್, ಕೆಲವು ತಿಂಗಳ ಕಾಲ ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಅವಕಾಶ ಕಳೆದುಕೊಂಡರು. ಬಳಿಕ ಅವರು 2009ರ ಐಸಿಸಿ ಟಿ20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿ ಆಯ್ಕೆಯಾದರು. ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋತಿತ್ತು. == ಅಂತರರಾಷ್ಟ್ರೀಯ ಟೆಸ್ಟ್ ಶತಕಗಳು == == ಅಂತರರಾಷ್ಟ್ರೀಯ ಏಕದಿನ ಶತಕಗಳು == == ಅಂತರರಾಷ್ಟ್ರೀಯ ಟಿ೨೦ ಶತಕಗಳು ==